covid 2 wave
0

ಕೊರೊನ ನರಭಕ್ಷಕ ಜನರ ಜೀವನ ತಲ್ಲಣಿಸುವಂತೆ ಮಾಡಿದೆ. ಕೊರೊನ ಸೋಂಕಿನಿಂದ ಲಕ್ಷಾಂತರ ಜನ ಸಾವನ್ನಪ್ಪಿದ್ದಾರೆ. ಕೋವಿಡ್ ಮೊದಲನೆ ಅಲೆ ಬಂದಾಗ, ಸರ್ಕಾರ ಲಾಕ್ ಡೌನ್ ಘೋಷಿಸುವ ಮೂಲಕ ಉತ್ತಮವಾದ ನಿರ್ಧಾರ ತೆಗೆದುಕೊಂಡಿದ್ದರು. ಲಾಕ್ ಡೌನ್ ಅವಧಿ ಮುಗಿಯುತ್ತಿದ್ದ ಹಾಗೆ, ಸಾರ್ವಜನಿಕರು ಸಹ ಯಾವುದೇ ಭಯವಿಲ್ಲದೆ ಓಡಾಡಲು ಶುರು ಮಾಡಿದರು. ಕೊರೊನ ಇಲ್ಲ, ಮಣ್ಣು ಇಲ್ಲ ಅಂತ ಜನರು ನಿರ್ಲಕ್ಷ ತೋರಿಸಿದರು. ಅದರ ಪರಿಣಾಮ, ಜನರು ಈಗ ಅನುಭವಿಸುತ್ತಿದ್ದಾರೆ.

ಕೋವಿಡ್ ಎರಡನೆ ಅಲೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಇದ್ದರೂ ಸಹ, ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಜನರನ್ನು ಬಲಿಪಶು ಮಾಡಿದ್ದಾರೆ. ಕೊರೊನ ರೂಪಾಂತರಿ ಕುರಿತು ವರದಿ ಪ್ರಕಟವಾಗುತ್ತಿದ್ದರೂ, ಅದರ ಕಡೆ ಲಕ್ಷ ಕೊಡದೆ ಜನರನ್ನು ಸೇರಿಸಿ, ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಉಪಚುನಾವಣೆಯ ರ್ಯಾಲಿ ಭರ್ಜರಿಯಾಗಿ ಮಾಡಿದ್ರು. ಕೊರೊನ ಸೋಂಕು ಹರಡುವುದರಲ್ಲಿ, ರಾಜಕಾರಣಿಗಳೇ ಮುಖ್ಯ ಕಾರಣಕರ್ತರಾಗಿದ್ದಾರೆ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಜನರನ್ನು ಬಲಿ ಪಡೆಯುತ್ತಿದ್ದಾರೆ.

ಉಪಚುನಾವಣೆಯ ಸಂದರ್ಭದಲ್ಲಿ ಸರ್ಕಾರ ಲಾಕ್ ಡೌನ್ ಘೋಷಿಸಬಹುದಾಗಿತ್ತು, ಆದರೆ ತಮ್ಮ ಬೇಲೆ ಬೇಯಿಸಿಕೊಳ್ಳುವುದರ ಸಲುವಾಗಿ ಜನರ ಪ್ರಾಣ ಗಾಳಿಗೆ ತೂರಿದರು. ರಾಜ್ಯದ ಜನತೆ ನಿಯಮಗಳನ್ನು ಸರಿಯಾಗಿ ಪಾಲಿಸದಿರುವುದರಿಂದ ಕಾವಿಡ್ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ.
ಈಗ ಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದು, ಆಸ್ಪತ್ರೆಗಳಲ್ಲಿ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಕೋವಿಡ್ ರೋಗಿಗಳು ಬೆಡ್ ಗಳು ಆಕ್ಸಿಜನ್ ಸಿಲಿಂಡರ್ ಗಳಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ಹೆಸರಿನಲ್ಲಿ ಚಿತಾಗಾರರು, ಮೃತ ದೇಹದ ಅಂತ್ಯ ಸಂಸ್ಕಾರಕ್ಕಾಗಿ ಜನರಿಂದ ಸಿಕ್ಕಾಪಟ್ಟೆ ದುಡ್ಡನ್ನು ಸುಲಿಗೆ ಮಾಡುತ್ತಿದ್ದಾರೆ.

ಇನ್ನೂ ಆಸ್ಪತೆಗಳಲ್ಲಿ ವೈದ್ಯರು ಮತ್ತು ನರ್ಸ್ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎನ್ನುವ ದೂರುಗಳು ವರದಿಯಾಗುತ್ತಿವೆ. ಇವರ ಬೇಜವ್ದಾರಿತನದಿಂದ ಜನರು ಮೃತ ಪಡುತ್ತಿದ್ದಾರೆ. ಆಕ್ಸ್ಫರ್ಡ್ ಆಸ್ಪತ್ರೆಯಲ್ಲಿ 200 ರೋಗಿಗಳಿಗಳನ್ನ ನೋಡಿಕೊಳ್ಳುವುದಕ್ಕೆ ಇರುವುದು ಕೇವಲ 2 ನರ್ಸ್ ಗಳು. ವೈದ್ಯೋ ನಾರಾಯಣ ಶ್ರೀ ಹರಿ ಅಂತ ಹೇಳ್ತಾರೆ ಆದರೆ ಇಲ್ಲಿ ವೈದ್ಯರು ಜನರನ್ನು ಸೀದಾ ವೈಕುಂಠಕ್ಕೆ ಕಳುಹಿಸುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಒಬ್ಬರು ಮೃತ ಪಟ್ಟರೆ, ಸರ್ಕಾರದ ವತಿಯಿಂದ ಅವರಿಗೆ 1 ಲಕ್ಷ ಹಣ ಸಿಗುತ್ತದೆ. ಇದೆ ಬಂಡವಾಳವನ್ನಾಗಿ ಟ್ಟುಕೊಂಡು ವೈದ್ಯರು ವ್ಯಾಪಾರ ಮಾಡುತ್ತಿದ್ದಾರೆ.ಯಾರಿಗಾದ್ರೂ ರೋಗ ಲಕ್ಷಣ ಕಾಣಿಸಿಕೊಂಡಲ್ಲಿ, ಮನೆಯಲ್ಲಿಯೇ ಚಿಕಿತ್ಸೆ ತೆಗೆದುಕೊಂಡು ಹಾಯಾಗಿರಿ. ಆಸ್ಪತ್ರೆಯತ್ತ ನಿಮ್ಮ ನೆರಳು ಸಹ ಹೋಗುವುದು ಬೇಡ. ಆಸ್ಪತ್ರೆಯಲ್ಲಿ ಪರಿಸ್ಥಿತಿ ಗಣ ಘೋರವಾಗಿದೆ.

Telegram Share

Don't Want to Miss Our Latest News Just Like and Follow Vodapav on facebook and Instagram.

Vodapav is now on Telegram. Click here to join our channel and stay updated with the latest news and updates.

Filmfare Awarad List Thappad To Irfan Khan

Previous article

ಸಮಾಜ ಕಲ್ಯಾಣ ಸಚಿವರಿಂದ ಕೋವಿಡ್ ನಿಯಮ ಉಲ್ಲಂಘನೆ..!

Next article

You may also like