0

ಪ್ರೀತಿ, ಪ್ರೇಮ ಅಂದ್ರೆ ಜನರು ಇಷ್ಟ ಪಡ್ತಾರೆ, ಆದರೆ ಇದರ ಜೊತೆ ಕ್ರೈಂ ಸೇರಿಕೊಂಡ್ರೆ ಜನರು ಆಶ್ಚರ್ಯ ಚಕಿತರಾಗ್ತಾರೆ. ಮನುಷ್ಯನ ಸೈಕಿಕ್ ನಡೆ ಹೀಗೆ ಇರುತ್ತದೆ ಅಂತ ಹೇಳೋಕ್ಕಾಗಲ್ಲ. ಅಚಾನಕ್ಕಾಗಿ ಅದು ಬೇರೆಯೇ ಒಂದು ರೂಪ ತೆಗೆದುಕೊಳ್ಳಬಹುದು. ಅನುಮಾನದ ಭೂತ ಒಂದು ಸಾರಿ ಬಂದ್ರೆ, ಪದೇ ಪದೇ ಅದು ನಮ್ಮನ್ನ ಕಾಡ್ತಾನೆ ಇರುತ್ತೆ. ಇಷ್ಕ್ , ಸಂಶಯ, ಸಂದರ್ಭ ಮಿಕ್ಸ್ ಆದರೆ ಏನಾಗುತ್ತೆ ನೀವೇ ನೋಡಿ.

 ಪ್ರೀತ್ಸೇ ಪ್ರೀತ್ಸೇ ಟೆಕ್ಕಿ ಹಿಂದೆ ಬಿದ್ದ ಪಾಗಲ್ ಪ್ರೇಮಿ

ಐಟಿ ಕಂಪನಿಯಲ್ಲಿ ಟೆಕಿಯಾಗಿ ಪ್ರಿಯಾ ಎನ್ನುವ ಹುಡುಗಿ ಸೇರಿಕೊಳ್ಳುತ್ತಾಳೆ. ಇಲ್ಲಿ ಪ್ರಿಯಾಗೆ, ಪ್ರನಾವ್ ನ ಪರಿಚಯವಾಗುತ್ತೆ . ಪ್ರಿಯಾಳ ಬರ್ತ್ಡೇ ಪಾರ್ಟಿಯಲ್ಲಿ, ಪ್ರನಾವ್ ಸಹ ಸೇರಿಕೊಳ್ಳುತ್ತಾನೆ. ಪಾರ್ಟಿ ಮುಗಿದ ಮೇಲೆ ಪ್ರನಾವ್, ಪ್ರಿಯಾಗೆ ಪ್ರೊಪೋಸ್ ಮಾಡುತ್ತಾನೆ. ಈಗಾಗಲೇ ನಾನು ಒಬ್ಬ ಹುಡುಗನನ್ನ ಪ್ರೀತಿಸುತ್ತಿದ್ದೇನೆ, ನಿನ್ನನ್ನು ಪ್ರೀತಿಸಲು ಆಗುವುದಿಲ್ಲ ಎಂದು ಹುಡುಗನಿಗೆ ಹೇಳುತ್ತಾಳೆ. ಆಗ ಪ್ರನಾವ್ ನಿನ್ನ ಪ್ರಿಯಕರನ  ಮರೆತು ನನ್ನನ್ನ ಪ್ರೀತಿಸು ಎಂದು ಹುಡುಗಿಗೆ ಹೇಳುತ್ತಾನೆ. ಇದಕ್ಕೆ ಒಪ್ಪದ ಹುಡುಗಿ ಜಾಗದಿಂದ ವಾಪಸ್ ಹೋಗುತ್ತಾಳೆ. ಪದೇ ಪದೇ ಆಫೀಸ್ ಸಮಯದಲ್ಲಿ ಇವಳೊಂದಿಗೆ ಮಾತನಾಡಲು ಹೋಗುತ್ತಿದ್ದ , ಪ್ರಿಯಾ ಇವನ ಕಡೆ ತಿರುಗಿ ಸಹ ನೋಡುತ್ತಿರಲಿಲ್ಲ.

 ಪ್ರಿಯಾ ನ ಹಿಂಬಾಲಿಸಿದ ಸೈಕೋ ಲವರ್ ಬಾಯ್ ಪ್ರನಾವ್

ಒಂದು ದಿನ ಪ್ರಿಯಾ ತನ್ನ ಪ್ರಿಯಕರ ಅನ್ವರ್ ನ ಭೇಟಿ ಮಾಡಲು ಕೆಂಗೇರಿಯ ಮೈದಾನಕ್ಕೆ ಹೋಗುತ್ತಾಳೆ, ಇದೆ ವೇಳೆಯಲ್ಲಿ ಐಟಿ ಹುಡುಗ ಇವಳನ್ನು ಹಿಂಬಾಲಿಸುತ್ತ ಬರುತ್ತಾನೆ. ನಾನು ಪ್ರಿಯಾ ನ ಹುಚ್ಚನಂತೆ ಪ್ರೀತಿಸುತ್ತಿದ್ದೇನೆ, ನನ್ನ ದಾರಿಗೆ ನೀನು ಅಡ್ಡ ಬರಬೇಡ ಎಂದು ಪ್ರಣವ್, ಅನ್ವರ್ ಗೆ ಹೇಳುತ್ತಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು , ಕೊನೆಗೆ ಜಗಳದಲ್ಲಿ ಅಂತ್ಯವಾಗುತ್ತೆ. ಹುಡುಗಿಯ ಪ್ರೀತಿಯ ಮೇಲೆ ಸಂಶಯ ಪಟ್ಟ ಪ್ರಿಯಕರ ಅನ್ವರ್, ಇನ್ಮುಂದೆ ನನಗೆ ನಿನ್ನ ಮುಖ ತೋರಿಸಬೇಡ ಎಂದು ಪ್ರಿಯಾ ಮೇಲೆ ರೇಗುತ್ತಾನೆ. ನಾನೇನು ಮಾಡಿಲ್ಲ ನಂದೇನು ತಪ್ಪಿಲ್ಲ ಅಂತ ಎಷ್ಟು ಸಾರಿ ಹೇಳಿದ್ರು ಸಹ ಅನ್ವರ್ ಕೇಳುವುದಿಲ್ಲ. ಇದರಿಂದ ಕೋಪಗೊಂಡ ಇವಳು ಪ್ರಿಯಕರನ ಜೋರಾಗಿ ನೂಕುತ್ತಾಳೆ. ಸೀದಾ ಅನ್ವರ್ ನ ತಲೆ ಗೋಡೆಗೆ ತಾಕಿ ಸತ್ತು ಹೋಗುತ್ತಾನೆ. ನೆತ್ತರಿನಿಂದ ರಕ್ತ ಕಾರಂಜಿಯಂತೆ ಚಿಮ್ಮುತ್ತದೆ. ಗೋಡೆಗೆ ರಕ್ತದ ಕಲೆ ಅಂಟಿರುತ್ತದೆ. ಕೃತ್ಯ ಸಣ್ಣದಾಗಿದ್ದರೂ ಸಹ ಇದರ ಪರಿಣಾಮ ದೊಡ್ಡದಾಗಿ ಕಾಣುತ್ತದೆ.

ಪೊಲೀಸರಿಗೆ ದೂರು ನೀಡಿದ ಅನ್ವರ್ ನ ಪೋಷಕರು

ಬೇರೆ ದಾರಿ ಕಾಣದೆ ಪ್ರಿಯಾ ಮತ್ತು ಪ್ರನಾವ್ ಹೆಣವನ್ನ ಸಮುದ್ರಕ್ಕೆ ಎಸೆದು ಬಿಡುತ್ತಾರೆ. ಮಾರನೆಯ ದಿನ ಹುಡುಗನ ತಂದೆ-ತಾಯಿ ನನ್ನ ಮಗ ಕಾಣೆಯಾಗಿದ್ದಾನೆ ಅಂತ ಪೊಲೀಸರಿಗೆ ದೂರು ಕೊಡುತ್ತಾರೆ. ಆಫೀಸ್ ನಲ್ಲಿ ಆ ಹುಡುಗನ ಸಹಚರರನ್ನ ಪೊಲೀಸರು ವಿಚಾರಿಸಿದಾಗ, ಯಾವಾಗ್ಲೂ ಆ ಪ್ರಿಯಾ ಹುಡುಗಿಯ ಸುತ್ತ ಪಾಗಲ್ ಪ್ರೇಮಿ ತರಹ ಸುತ್ತುತ್ತಿದ್ದ, ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಾನಸಿಕವಾಗಿ ನೊಂದಿದ್ದ ಎನ್ನುವ ವಿಷಯಗಳು ಬಯಲಿಗೆ ಬರುತ್ತವೆ. ಈ ಸುಳುವಿನ ಮೇರೆಗೆ ತನಿಖಾಧಾರಿಗಳು, ಪ್ರಕರಣದ ಆರೋಪಿಗಳ ಜಾಡು ಹುಡುಕುತ್ತ ಹೋಗುತ್ತಾರೆ. ಆದ್ರೆ ಈಗ ಪ್ರಣವ್ ಮತ್ತು ಪ್ರಿಯಾ ಒಂದಾಗಿರವುದನ್ನ ನೋಡಿದ ಪೊಲೀಸರಿಗೆ ಸಂಶಯದ ಹುಳು ಜನ್ಮ ತಾಳುತ್ತೆ.

ಅನ್ವರ್ ನ ಎದೆಯ ಮೇಲೆ ಅಚ್ಚು

ಸಮುದ್ರದಲ್ಲಿ ಬಿಸಾಡಿದ ಹೆಣವು ಪತ್ತೆಯಾಗುತ್ತೆ, ಹೆಣದ ಎದೆಯ ಭಾಗದಲ್ಲಿ ಪ್ರಿಯಾ ಮೇರಿ ಜಾನ್ ಅಂತ ಅಚ್ಛೆ ಹಾಕಿಸಿಕೊಂಡಿರುವುದನ್ನ ಪೊಲೀಸರು ಗಮನಿಸುತ್ತಾರೆ. ಇನ್ನೊಂದು ಕಡೆ ಬರ್ತ್ಡೇ ಕೇಕ್ ಮೇಲೆ ಲಾಟ್ಸ್ ಆಫ್ ಲವ್ ಫ್ರಮ್ ಅನ್ವರ್ ಅಂತ ಬರೆದಿರುವ ಅಕ್ಷರದ ಫಲಕ ಆಫೀಸ್ ಪಾರ್ಟಿ ರೂಮ್ ನಲ್ಲಿ ಪೊಲೀಸರಿಗೆ ಸಿಗುತ್ತೆ . ಇಬ್ಬರನ್ನ ವಿಚಾರಣೆಗೆ ಹಾಜರ್ ಪಡಿಸಿದಾಗ, ಮಾಡಿದ ಆರೋಪ ಒಪ್ಪಿಕೊಳ್ಳುತ್ತಾರೆ. ಕೊಲೆಯಲ್ಲಿ ಒಂದಾದ ಜೋಡಿ ಅಂದರ್.

Slugs: ೧ ಕ್ರೈಂ ನಿಂದ ಅಂತ್ಯವಾದ ಹಳೆ ಲವ್
೨ ನಾ ನಿನ್ನ ಬಿಡಲಾರೆ, ಪ್ರಿಯಾಗೆ ಪ್ರಣವ್ ಕಾಟ
೩ ಬಲವಾಗಿ ಅನ್ವರ್ ನ ಧೂಡಿದ ಪ್ರಿಯಾ
೪ ಗೋಡೆಗೆ ತಲೆ ತಾಗಿ ಸತ್ತು ಹೋದ ಅನ್ವರ್
೫ ಹೆಣ ಬಿಸಾಡುವುದರಲ್ಲಿ ಪ್ರಿಯಾ ಜೊತೆ ಶ್ಯಾಮೀಲಾದ ಪ್ರಣವ್
೬ ಕ್ರೈಂ ಕೇಸ್ ನ ರಹಸ್ಯವನ್ನ ಭೇದಿಸಿದ ಪೊಲೀಸ್ ತಂಡ

Telegram Share

Don't Want to Miss Our Latest News Just Like and Follow Vodapav on facebook and Instagram.

Vodapav is now on Telegram. Click here to join our channel and stay updated with the latest news and updates.

ಲಾಕ್ ಡೌನ್ ಪ್ರೇಮ ಕತೆಗಳು: ಹದಿಹರೆಯದ ಮನದ ಬಯಕೆ

Previous article

Let’s Work Towards Covid Free India

Next article

You may also like

Comments

Comments are closed.