0

ಭಾರತೀಯರು ಗೋವುಗಳಿಗೆ ಪೂಜ್ಯ ಸ್ಥಾನವನ್ನು ಕೊಟ್ಟಿದ್ದಾರೆ. ಹಸುವಿನಲ್ಲಿ ಕೋಟ್ಯಾಂತರ ದೇವರು ಇರುತ್ತಾರೆ ಎಂದು ಪುರಾಣ ಹಾಗು ಇತಿಹಾಸದ ಪ್ರಕಾರ ಹೇಳಲಾಗುತ್ತಿದ್ದು, ಇದನ್ನು ಜನರು ಅನುಸರಿಸುತ್ತ, ನಂಬುತ್ತಾ ಬಂದಿದ್ದಾರೆ. ತಾಯಿಗೆ ಎಷ್ಟು ಗೌರವ ಕೊಡುತ್ತಿರೋ, ಅಷ್ಟೇ ಗೌರವವನ್ನು ಗೋ ಮಾತೆಗೆ ಕೊಡಬೇಕಾಗುತ್ತದೆ. ಜನರು ಹಸುಗಳನ್ನ ಕಂಡರೆ, ಈಗಲೂ ಅದನ್ನು ಮುಟ್ಟಿ ನಮಸ್ಕರಿಸುತ್ತಾರೆ, ಅದಕ್ಕೆ ಕುಂಕುಮ ಇಟ್ಟು ಕಳುಹಿಸುತ್ತಾರೆ. ಇನ್ನು ಕೆಲವರು ನೇಮ, ನಿಷ್ಠೆಯಿಂದ ಗೋವುಗಳನ್ನ ಪೂಜಿಸುತ್ತಾರೆ.

ಹಣದ ಆಸೆಗಾಗಿ ಮಾನವೀಯತೆಯ ಕಗ್ಗೊಲೆ

ಹಣದ ಆಸೆಗಾಗಿ ಕೆಲವರು, ಗೋವುಗಳನ್ನ ಕೊಂದು, ಇತರ ರಾಷ್ಟ್ರಗಳಿಗೆ ಕಳ್ಳ ಸಾಗಣೆ ಮಾಡಿದ್ದಾರೆ. ಹೌದು ಇದು ಇತ್ತೀಚಿಗಷ್ಟೇ ನಡೆದ ಮನಕಲುಕುವ ಘಟನೆಯಾಗಿದೆ. ಬಾಂಗ್ಲಾ ಗಡಿಯಲ್ಲಿ, ನಮ್ಮ ದೇಶದ ಹಸುಗಳನ್ನ ಕೊಂದು, ಅವುಗಳ ಶವಗಳನ್ನ ಬಾಳೆದಿಂಡಿಗೆ ಕಟ್ಟಿ, ಸಮುದ್ರದಲ್ಲಿ ಕಳ್ಳ ಸಾಗಣೆ ಮಾಡಿರುವ ಹೀನವಾದ ಕೃತ್ಯ ನಡೆದಿದೆ. ಬೇರೆ ದೇಶಗಳಲ್ಲಿ ಗೋಮಾಂಸಕ್ಕೆ ಭಾರಿ ಬೇಡಿಕೆ ಇದೆ.ಗೋವುಗಳ ಗಾತ್ರದ ಮೇಲೆ ಬೆಲೆ ನಿಗಧಿಯಾಗುತ್ತದೆ. ಅಕಸ್ಮಾತ್ ಹಸುವಿನ ಹೊಟ್ಟೆಯ ಗಾತ್ರ ದೊಡ್ಡದಾಗಿದ್ದರೆ, ಅದರಲ್ಲಿ ಹಸುವಿನ ಕರು ಮತ್ತು ಗಾಂಜಾ, ಹಫೀಮ್ ತುಂಬಿಸಿ ಸಾಗಿಸುತ್ತಾರೆ. ಇದರಲ್ಲಿ ಭಾರತದ ಗಡಿಯಲ್ಲಿರುವ ಜನರು ಸಹ ಭಾಗಿಯಾಗಿದ್ದು, ಹಣಕ್ಕಾಗಿ ಇಂತಹ ನೀಚ ಕೆಲಸ ಮಾಡಿದ್ದಾರೆ.

ಅಜಾತ ಶತ್ರು ವಾಜ್ ಪೇಯ್ ಪರಿಹಾರ

ಇಂತಹ ಅಮಾನವೀಯ ಕೃತ್ಯಗಳನ್ನ ತಡೆಗಟ್ಟಲು, 1993 ರಲ್ಲಿ ವಾಜ್ ಪೇಯಿ ಸಾಕಷ್ಟು ಪರಿಹಾರ ನೀಡಿದ್ದರು. ಗಡಿಯಲ್ಲಿ ಬೇಲಿಗಳನ್ನ ನಿರ್ಮಿಸುವುದು, ಗಡಿ ಪ್ರದೇಶದಲ್ಲಿ ಹೆಚ್ಚಾಗಿ ಬಿಎಸ್ಎಫ್ ಯೋಧರನ್ನ ನಿಯೋಜಿಸುವುದು,ಫಿನ್ಸಿನ್ಗ್ ಬಳಿ ಲೈಟ್ಸ್ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಬೇಕೆಂದು ವಾಜ್ ಪೇಯ್ ಅವರು ಆಡಳಿತದಲ್ಲಿದ್ದಾಗ ಹೇಳಿದ್ದರು. ಈಗ ಕೇಂದ್ರ ಸರ್ಕಾರ ಇದನ್ನೇ ಮತ್ತೆ ಕಾರ್ಯರೂಪಕ್ಕೆ ತರುತ್ತಾರಾ ಎಂದು ಕಾದು ನೋಡಬೇಕಿದೆ. ಆದಷ್ಟು ಬೇಗ ಸರ್ಕಾರ ದಂಧೆ ಕೋರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಿದ್ದು, ಶೀಘ್ರವಾಗಿ ಈ ಕ್ರೂರವಾದ ಕೃತ್ಯಕ್ಕೆ ಬ್ರೇಕ್ ಹಾಕಬೇಕಿದೆ.

Telegram Share

Don't Want to Miss Our Latest News Just Like and Follow Vodapav on facebook and Instagram.

Vodapav is now on Telegram. Click here to join our channel and stay updated with the latest news and updates.

Samantha’s CDP Released on Her Birthday

Previous article

ಅಣ್ಣಾವ್ರ ಮೇರು ವ್ಯಕ್ತಿತ್ವದ ನಿದರ್ಶನಗಳ ಒಂದು ನೋಟ

Next article

You may also like

Comments

Comments are closed.