ಸುಂದರವಾದ ಹುಡುಗ, ನೋಡಲು ಸ್ಪುರದ್ರೂಪಿ ಹೆಸರು ತೊಗೊಂಡ್ ಏನ್ ಮಾಡ್ತೀರಿ ಬಿಡಿ, ಸದ್ಯಕ್ಕೆ ಇವನ ಹೆಸರು ಬಹಿರಂಗ ಪಡಿಸೋದಿಲ್ಲ. ಇವನಿಗೆ ವಯಸ್ಸು ೨೨, ತುಂಟ ಗೆಳೆಯರ ಬಳಗ ಹೊಂದಿದ್ದನು. ಗೆಳೆಯರ ವಿಷಯದಲ್ಲಿ ನಿಜಕ್ಕೂ ಇವ ಪುಣ್ಯ ಮಾಡಿದ್ದಾನೆ. ಯಾಕೆಂದ್ರೆ ಎಲ್ಲದಕ್ಕೂ ಸಹಾಯ ಮಾಡ್ತಾರೆ. ಬೇಜಾರು ಎಂದರೇನು? ಅಂತ ಇವನಿಗೆ ಗೊತ್ತಾಗುತ್ತಿರಲಿಲ್ಲ, ಗೆಳೆಯರು ಅದನ್ನೆಲ್ಲಾ ಮರೆಸುತ್ತಿದ್ದರು.
ವಯಸ್ಸಿನ ಕಾಮನೆ
ಕ್ರಿಕೆಟ್, ಇಸ್ಪೇಟ್, ಮೋಜು-ಮಸ್ತಿ ಹೀಗೆ ಸ್ನೇಹಿತರ ಜೊತೆಗೆ ಕಾಲಹರಣ ಮಾಡುತ್ತಾ ಹಾಯಾಗಿದ್ದನು. ಕಾಲೇಜ್ ಗೆ ಹೋಗುತ್ತಿದ್ದ, ಆದರೆ ಕ್ಲಾಸ್ ಗೆ ಹೋಗುತ್ತಿದ್ದನೋ ಇಲ್ಲವೋ ಗೊತ್ತಿಲ್ಲ. ಇವನು ಮೊದಲಿನಿಂದಾನು ಹುಡುಗರ ಜೊತೆಗೆ ಆಡಿ ಬೆಳೆದಿದ್ದರಿಂದ, ಹುಡುಗಿಯರ ಜೊತೆಗೆ ಅಷ್ಟೊಂದು ಒಡನಾಟ ಬೆಳೆಸಿಕೊಂಡಿರಲಿಲ್ಲ. ಸಹಜವಾಗಿಯೇ ಆ ವಯಸ್ಸಿನಲ್ಲಿ, ಹುಡುಗಿಯರ ಜೊತೆ ಸ್ನೇಹ ಮಾಡಬೇಕು, ಪ್ರೀತಿಸಬೇಕು, ಇಷ್ಟ ಪಟ್ಟ ಹುಡುಗಿಯ ತುಟಿಗೆ ಮುತ್ತು ಕೊಡಬೇಕೆನ್ನುವ ಯೋಚನೆಗಳು ಮಿಂಚಿನಂತೆ ಹಿಂಗ್ ಬಂದ್ ಹಂಗ್ ಹೋಗ್ತಾವೆ.
ಕಿಟಕಿಯಲ್ಲಿ ಕಂಡ ಸೌಂದರ್ಯ
ಆದರೆ ಬಡಪಾಯಿ ಹುಡುಗನಿಗೆ ಇವುಗಳು ಯಾವುದು ಸಹ ವರ್ಕ್ ಔಟ್ ಆಗುವುದಿಲ್ಲ. ಹುಡುಗನ ಎದುರಿನ ಮನೆಗೆ ಹೊಸ ಪರಿವಾರ ಬರುವುದರ ಸುದ್ದಿ ಹಬ್ಬಿರುತ್ತದೆ. ಹದಿಹರಿಯದ, ಕೋಮಲ ಕೆನ್ನೆಯ, ಅಪರೂಪದ ರೂಪವುಳ್ಳ ಸುಂದರ ತರುಣಿ ಬಳುಕುತ್ತ ನಡೆದುಕೊಂಡು ಬರುವುದನ್ನ ಇವನು ಕಿಟಕಿಯಲ್ಲಿ ನೋಡುತ್ತ, ಒಳಗ್ ಒಳಗೆ ಖುಷಿ ಪಡುತ್ತಿರುತ್ತಾನೆ. ಆಗ ಆ ಹುಡುಗಿಯು ಸಹ ಒಂದು ಕಿರು ನೋಟ ಹುಡುಗನತ್ತ ಬಿಸಾಕುತ್ತಾಳೆ. ಬರಡು ಭೂಮಿಗೆ ಮಳೆ ಸುರಿದಂತೆ, ಇವನ ಕನಸು ನನಸಾದಂತಿದೆ.
ಬೋಲ್ಡ್ ಹುಡುಗಿ, ರಿವರ್ಸ್ ಹೊಡೆದ ಹುಡುಗ
ಹೊಸ ಹುಡುಗಿ ಬಂದಿರುವ ಸುದ್ದಿ, ಇಡೀ ಕಾಲೋನಿ ಗೆ ಗೊತ್ತಾಗುತ್ತದೆ. ಎಂದಿನಂತೆ ಭಾನುವಾರದ ದಿನ ಎಲ್ಲಾ ಹುಡುಗ್ರು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿರುತ್ತಾರೆ. ಇದೆ ಸಮಯದಲ್ಲಿ ಮೈದಾನದಲ್ಲಿ ಬಿರುಗಾಳಿ ಬಂದಂತೆ ಭಾಸವಾಗುತ್ತದೆ. ಹೊಸ ಹುಡುಗಿ ಟಿ ಶರ್ಟ್ ಮತ್ತು ಚಿಕ್ ಚಡ್ಡಿ ಹಾಕಿಕೊಂಡು ಬಂದಿದ್ದು, ನಾನು ಸಹ ಕ್ರಿಕೆಟ್ ಆಡ್ ಬಹುದಾ ಎಂದು ಕೇಳುತ್ತಾಳೆ.
ಆಗ ಹುಡುಗ ಕ್ಷಮಿಸಿ, ಇದು ಹುಡುಗರ ಅಡ್ಡ ಹುಡುಗೀರ್ಗೆ ಅವಕಾಶ ಇಲ್ಲ ಎಂದು ಹೇಳುತ್ತಾನೆ. ಓಹ್ ಹೌದಾ, ಸರಿ ಬಿಡು ಎಂದು ಹೇಳಿ, ಹುಡುಗನ ಕೆನ್ನೆ ಸವರಿ, ಸಿಗರೇಟ್ ಹಚ್ಚುತ್ತಾಳೆ. ಹೇಯ್ ಛೀ ಕೈ ತಗಿ ಎಂದು ಹುಡುಗ ಹೇಳುತ್ತಾನೆ.
ಕತೆ ಮುಂದುವರೆಯುವುದು

Comments