ಬಳ್ಳಾರಿ: ಕೊರೋನಾ ಗೆ ಅದೆಷ್ಟೋ ಜನ ಬಲಿಯಾಗಿದ್ದು, ಈಗಲೂ ಜನರು ಸಾವು-ನೋವನ್ನು ಅನುಭವಿಸುತ್ತಿದ್ದಾರೆ. ಇದನ್ನು ತಡೆಗಟ್ಟಲು ಸರ್ಕಾರ ವೀಕ್ ಎಂಡ್ ಲೊಕ್ಡೌನ್ ಮತ್ತು ಜನತಾ ಕರ್ಫ್ಯೂ ಕ್ರಮಗಳನ್ನ ಜಾರಿಗೆ ತಂದಿದ್ದಾರೆ. ಆದರೆ ಸಮಾಜ ಕಲ್ಯಾಣ ಸಚಿವ ಶ್ರೀ ರಾಮುಲು ಬಳ್ಳಾರಿಯಲ್ಲಿ,ಕೋವಿಡ್ ನಿಯಾಮಾವಳಿಗಳನ್ನ ಪಾಲಿಸದೆ, ಪಾಲಿಕೆ ಚುನಾವಣೆಯ ಪ್ರಚಾರ ನಡೆಸಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿದ ಶ್ರೀ ರಾಮುಲು
ಸಮಾಜದ ಕಲ್ಯಾಣಕ್ಕಾಗಿ ಹೋರಾಡಬೇಕಾಗಿರುವ ಶ್ರೀ ರಾಮುಲು, ಸಮಾಜದ ದುಸ್ಥಿತಿಗೆ ಕಾರಣವಾಗಿದ್ದಾರೆ. ಪ್ರಚಾರದ ವೇಳೆಯಲ್ಲಿ ಹೆಚ್ಚಿನ ಸಂಖ್ಯೆ ಜನ ಸೇರಿದ್ದು, ಮಾಸ್ಕ್ ಧರಿಸದೇ ಶ್ರೀ ರಾಮುಲು ಜನರೊಂದಿಗೆ ಚುನಾವಣೆಯ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ.
ಟ್ವಿಟ್ಟರ್ ನಲ್ಲಿ ಜನನಾಯಕನ ಸಮರ್ಥನೆ
ನಾನೇನು ಮಾಡಲಿ ಬೇಡ ಬೇಡ ಅಂತ ಎಷ್ಟು ಹೇಳಿದರೂ ಸಹ ಜನರು ಮೈ ಮೇಲೆ ಬೀಳುತ್ತಿದ್ದಾರೆ. ಜನರು ನನ್ನ ಮಾತು ಕೇಳಲಿಲ್ಲ. ಮಾಸ್ಕ್ ತೆಗೀರಿ ಸೆಲ್ಫಿ ತೆಗೆದುಕೊಳ್ಳಬೇಕು ಅಂತ ಜನರು ಹೇಳುತ್ತಿದ್ದು, ನಾನು ಸಂಧಿಗ್ದ ಪರಿಸ್ಥಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೆ. ಚುನಾವಣಾ ಅಂದ ಮೇಲೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದು ನನ್ನ ಕರ್ತವ್ಯ ಎಂದು ಟ್ವಿಟ್ಟರ್ ನಲ್ಲಿ ಶ್ರೀ ರಾಮುಲು ಸಮರ್ಥನೆ ಕೊಟ್ಟಿದ್ದಾರೆ. ಶ್ರೀ ರಾಮುಲು ಮಾಡಿದ ಟ್ವೀಟ್ ಗೆ ನೆಟ್ಟಿಗರು ಕ್ಯಾಕರಿಸಿ ಉಗಿಯುತ್ತಿದ್ದಾರೆ.
ಆಕ್ರೋಶ ವ್ಯಕ್ತ ಪಡಿಸಿದ ನೆಟ್ಟಿಗರು
ಸಾರ್ವಜನಿಕರಿಗೆ ಒಂದು ರೂಲ್ಸ್, ರಾಜಕಾರಣಿಗಳಿಗೆ ಒಂದು ರೂಲ್ಸ್ ಆ ಏನ್? ಸ್ವಾಮಿ ಇದು. ಜನ ನಾಯಕರೇ ಈ ರೀತಿ ಮಾಡಿದರೆ, ಇನ್ನೂ ಪ್ರಜೆಗಳ ಗತಿ ಏನು?. ಜನರು ತಪ್ಪು ಮಾಡಿದರೆ ಬುದ್ದಿ ಹೇಳಬೇಕಾದ ರಾಜಕಾರಣಿಗಳೇ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ.

Comments