0

ಶೃಂಗೇರಿಯ ಒಂದು ಹಳ್ಳಿಯಲ್ಲಿ ರಹಸ್ಯಮಯವಾದ, ಅಚ್ಚರಿ ಹುಟ್ಟಿಸುವಂತಹ ಘಟನೆ ನಡೆದಿರುತ್ತದೆ. ಫಸ್ಟ್ ಇಯರ್ ಬಿಕಾಮ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಹೋಗಿದ್ದು, ಮನೆಗೆ ಮರಳಿಲ್ಲ ಎನ್ನುವ ಕಾರಣದಿಂದಾಗಿ, ಹುಡುಗಿಯ ಪೋಷಕರು ಆತಂಕಗೊಂಡು, ಈ ವಿಷಯವನ್ನು ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡುವ ಮೂಲಕ ತಿಳಿಸುತ್ತಾರೆ. ಸಂಜೆ ಸುಮಾರು ೭ ಗಂಟೆಗೆ ಒಂದು ಹಾಳು ಬಾವಿಯ ಹತ್ತಿರ ದೂರು ಕೊಟ್ಟ ಪೋಷಕರ ಮಗಳ ಶವ ಪೊಲೀಸರಿಗೆ ಸಿಗುತ್ತದೆ. ನಮ್ಮ ಮಗಳು ಹೊಟ್ಟೆ ನೋವಿನಿಂದ ನರಳುತ್ತಿದ್ದಳು, ಆದರೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದರ ಕುರಿತು ನಮಗೆ ಸ್ಪಷ್ಟತೆ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಯ ತಾಯಿ ಪೊಲೀಸರಿಗೆ ಹೇಳಿದ್ದು, ಇದು ಅನುಮಾನಸ್ಪದವಾದ ಸಾವು ಎಂದು ಪರಿಗಣಿಸಿ ಪೊಲೀಸ್ ಅಧಿಕಾರಿ ಕೇಸ್ ನ ದಾಖಲಿಸಿಕೊಳ್ಳುತ್ತಾರೆ.

ಪೋಸ್ಟ್ ಮಾರ್ಟಮ್ ಬಳಿಕ ಆಘಾತದ ವಿಷಯ ಬಯಲು 

ನಂತರ ತನಿಖೆ ಆರಂಭಿಸಿದ ತನಿಖಾ ಅಧಿಕಾರಿಗಳಿಗೆ ಕೇಸ್ ನಲ್ಲಿ ಹೆಚ್ಚು ಸಂಶಯಗಳು ಕಾಡುತ್ತವೆ. ಹುಡುಗಿ ಮನೆಗೆ ಆಗಮಿಸುವ ರಸ್ತೆಯಲ್ಲಿ ಬಾವಿಗಳು ಇಲ್ಲ‌‌.‌ ಇನ್ನೊಂದು ಪ್ರಮುಖ ಅಂಶವೆಂದರೆ, ಪಾಳು ಬಿದ್ದ ಬಾವಿಯಲ್ಲಿ ಅರ್ಧ ಮಟ್ಟದ ನೀರು ಮಾತ್ರ ತುಂಬಿಕೊಂಡಿದೆ.‌ ಈ ಎರಡು ವಿಷಯಗಳು, ತನಿಖಾ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಪೋಸ್ಟ್ ಮಾರ್ಟಮ್ ಗಾಗಿ ಮನಿಪಾಲ್ ಆಸ್ಪತ್ರೆಯನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಡಾಕ್ಟರ್ ಡೇಸಿಯಲ್ ಡಿಸೋಜಾ ಪೋಸ್ಟ್ ಮಾರ್ಟಮ್ ಮಾಡಿದ ನಂತರ ಆಘಾತದ ವರದಿ ಬಯಲಿಗೆ ಬರುತ್ತದೆ. ಇದು ಗ್ಯಾಂಗ್ ರೇಪ್ ಮತ್ತು ಮರ್ಡರ್ ಎಂದು ಡಾಕ್ಟರ್ ಪೊಲೀಸ್ ಅಧಿಕಾರಿಗೆ ತಿಳಿಸಿದ್ದು, ಇದು ಮರ್ಡರ್ ಕೇಸ್ ಎಂದು ಪೋಷಕರಿಂದ ಕೇಸ್ ದಾಖಲಾಗುತ್ತದೆ. ಕೃತ್ಯ ಎಸಗಿರುವ ಆರೋಪಿಗಳಿಗಾಗಿ, ಪೊಲೀಸರು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಾರೆ.

ಚಾಣಾಕ್ಷತನದಿಂದ ನಡೆದಿತ್ತು ಪೊಲೀಸರ ವಿಚಾರಣೆ

ಹಳ್ಳಿಯಲ್ಲಿ ತನಿಖೆ ಶುರುವಾಗಿದ್ದು, ತನಿಖೆಯ ಪ್ರಕ್ರಿಯೆಯಲ್ಲಿ ಸಿಕ್ಕ ವ್ಯಕ್ತಿಯ ಮುಖದ ಮೇಲೆ ಪರಚು ಗಾಯಗಳಿರುತ್ತವೆ. ಏನಿದು ಗಾಯಗಳು ಅಂತ ಕೇಳಿದಾಗ? ನಾಯಿ ಪರಚಿತ್ತು ಅಂತ ಹೇಳ್ತಾನೆ. ತೀವ್ರವಾಗಿ ತನಿಖೆ ಮಾಡುತ್ತ ಹೋದ ಹಾಗೆ, ಪೊಲೀಸರ ಕಣ್ಣಿನಂದ ಇಬ್ಬರು ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದು ಒಬ್ಬ ತಪ್ಪಿಸಿಕೊಂಡರೆ, ಇನ್ನೊಬ್ಬ ಪೊಲೀಸರು ಬೀಸಿದ ಬಲೆಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ವಿಚಾರಣೆ ಮಾಡಿದಾಗ, ತಪೊಪ್ಪಿಕೊಳ್ಳುತ್ತಾನೆ. ಆ ಹುಡುಗಿ ಕಾಲೇಜಿನಿಂದ ಬರುವ ಸಮಯದಲ್ಲಿ ಇಬ್ಬರು ಸೇರಿ ಅತ್ಯಾಚಾರವನ್ನು ಮಾಡಿದ್ದೇವೆ ಎಂದು ಆರೋಪಿ ಬಾಯಿ ಬಿಡುತ್ತಾನೆ.

ಹುಡುಗಿಗೆ ನ್ಯಾಯ ಕೊಡಿಸಿದ ಎಸಿಪಿ

ಶಿಕ್ಷೆಯಾಗುತ್ತದೆ ಎನ್ನುವ ಭಯದಲ್ಲಿ ಆರೋಪಿಯ ಸಹಚರ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ನಂತರ ಪೊಲೀಸರು ಆಸ್ಪತ್ರೆಗೆ ಸೇರಿಸಿಸುತ್ತಾರೆ. ಇಬ್ಬರ ಮೇಲೆ ಎಸಿಪಿ ಕಠಿಣವಾದ ಕ್ರಮ ತೆಗೆದುಕೊಂಡು, ಜೈಲು ಶಿಕ್ಷೆಯನ್ನು ಕೊಡಿಸುತ್ತಾರೆ. ಇಷ್ಟು ದೊಡ್ಡ ಕೃತ್ಯ ಮಾಡಿದ ಅಪರಾಧಿಗಳಿಗೆ, ಈ ಶಿಕ್ಷೆ ಸಾಲುವುದಿಲ್ಲ, ಎನ್ಕೌಂಟರ್ ಯಾಕೆ? ಮಾಡಲಿಲ್ಲ ಎಂದು ಜನರು ಎಸಿಪಿ ಗೆ ಪ್ರಶ್ನಿಸುತ್ತಾರೆ. ಈ ಕೇಸ್ ತೆಗೆದುಕೊಂಡ ಎಸಿಪಿ ಮಂಗಳೂರಿಗೆ ವರ್ಗಾವಣೆ ಆಗಿದ್ದು ,ಆದರೂ ಸಹ ಕೇಸ್ ನ ತನಿಖೆ ಬಿಟ್ಟಿರಲಿಲ್ಲ. ಪ್ರಕರಣದ ಹಲವಾರು ದೃಷ್ಟಿಕೋನದ ವಿವರಣೆ ನೀಡುವ ಮೂಲಕ ನ್ಯಾಯಾಲಯಕ್ಕೆ ಮನವೊಲಿಸಿದ್ದು, ನ್ಯಾಯಾಲಯ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸುತ್ತದೆ. ಈ ಪ್ರಕರಣದ ಸಂಪೂರ್ಣ ಕ್ರೆಡಿಟ್ ಶೃಂಗೇರಿಯ ಎಸಿಪಿಗೆ ಸಲ್ಲುತ್ತದೆ.

Telegram Share

Don't Want to Miss Our Latest News Just Like and Follow Vodapav on facebook and Instagram.

Vodapav is now on Telegram. Click here to join our channel and stay updated with the latest news and updates.

Kyaabre all new kannada Web series by Tharle Box

Previous article

Samantha’s CDP Released on Her Birthday

Next article

You may also like

Comments

Comments are closed.